ತುಂಬಿಸಿದೆ ಜಗದಗಲ

ತುಂಬಿಸಿದೆ ಜಗದಗಲ ನಂಬಿಗೆಯ ಬೆಳಕ |
ಬಿಂಬಿಸಿದೆ ಧ್ಯೇಯ ವಿಜೃಂಭಿಸಿದೆ ಪುಳಕ || ಪ ||

ಗ್ರಾಮಗುಹೆಕಾನನವೆ ನಗರನಗಜಗವೆ
ಛಾತ್ರ ಕಾರ್ಮಿಕ ಕೃಷಿಕ ಮಹಿಳೆಯೆ ಮಗುವೆ
ರೂಪಿಸಿಹೆ ಸಂಸ್ಕೃತಿಯ ಬದಲಾಯ್ತು ಯುಗವೆ
ವ್ಯಾಪಿಸಿಹೆ ಮನೆ ಮನವ ಅರಳಿಹುದು ಭಗವೆ || 1 ||

ಸಂಘಟನೆ ಸಂಘರ್ಷ ಸೃಷ್ಟಿ ಶೀಲತೆಯೆ
ಲೋಕಮನ ಸಂಸ್ಕಾರ ನಿತ್ಯ ಜಾಗೃತಿಯೆ
ಹಿಂದು ರಾಷ್ಟ್ರದ ಪರಮವೈಭವ ಶ್ರುತಿಯೆ
ನಂದದಾದರ್ಶಗಳ ಮೂರ್ತ ಸತ್‍ಕೃತಿಯೆ || 2 ||

ಮಾನವತೆ ನೆಲೆಗೊಳಿಸಿ ಮೆರೆವ ಛಲಬಲವೆ |
ಮನುಕುಲಕೆ ಭರವಸೆಯ ನಿರ್ಭೀತ ನಿಲುವೆ ||
ಮುನಿಜನರ ಮನದೊಲವೆ ವಿಶ್ವಮಂಗಲೆಯೆ
ಮಾನವಂದ್ಯಳೆ ತಾಯೆ ಸಂಘರೂಪಿಣಿಯೆ || 3 ||

Leave a Reply

Your email address will not be published. Required fields are marked *