ಹಾರದಿರು ಮನ ಕಡಲಾಚೆ

ಹಾರದಿರು ಮನ ಕಡಲಾಚೆ
ಯೋಚಿಸದಿರು ನೀ ತೊಡು ಭಾಷೆ
ಮಮತೆಯ ಹೆತ್ತ ಒಡಲಲ್ಲಿರಲು
ಏತಕೆ ಪರತಾಯಿಯ ಮಡಿಲು? || ಪ ||

ಹಾರದಿರು ಮನ ಹಾರದಿರು
ಹಾರದಿರು ಮನ ಕಡಲಾಚೆ || ಅ.ಪ.||

ಈ ತಾಯಿಯ ಮನೆ, ಮನ ಬಂಗಾರ
ಮೆರೆಯುವ ಗಿರಿ ವನ ಸಿರಿ ಸಿಂಗಾರ
ಗಂಗೆಯ ತುಂಗೆಯ ಸಂಗೀತದಲಿ
ಅರಳದೆ ಮನ ನೆಲೆ ನಿಲ್ಲದೆ ಇಲ್ಲಿ? || 1 ||

ಭಕ್ತಿಯು ಬರದೆ ವಿರಕ್ತಿಯದೇಕೆ ?
ಹೊಣೆಯರಿಯದೆ ಹೊರ ಜಾರುವುದೇಕೆ?
ವೀರರ ಸಂತ ಮಹಾತ್ಮರ ಕೀರ್ತಿ
ತಾರದೆ ಕೆಚ್ಚನು ಹೆಚ್ಚಿನ ಸ್ಫೂರ್ತಿ? || 2 ||

ಆ ಸಂಸ್ಕೃತಿ ನವ ನಾಗರಿಕತೆಗೆ
ಮರುಳಾದೆಯ ನೀ ಬಿದ್ದೆಯಾ ಬಲೆಗೆ?
ಇಂದಿನ ಈ ಸುಖ ಶಾಶ್ವತವೆಂದು
ನಂಬದಿರು, ಮನ ಸೋಲದೆ ಬಂಧು || 3 ||

ಈ ನೆಲ ಬಿಟ್ಟರೆ ಏಳಿಗೆ ಇಲ್ಲ
ಆ ನೆಲ ಜಲ ನಿನಗೆಂದಿಗು ಸಲ್ಲ
ನಿನ್ನನು ಹೆತ್ತು ಹೊತ್ತಿಹ ಋಣಕೆ
ಮುಡುಪಿಡು ಜೀವನ-ಸಲ್ಲಲಿ ಹರಕೆ || 4 ||

Leave a Reply

Your email address will not be published. Required fields are marked *