ಭರತ ಭೂಮಿಯ ವರಗುವರನಾ

ಭರತ ಭೂಮಿಯ ವರಗುವರನಾ
ಗುರುವೆ ನಿನ್ನಯ ಚರಣಕೆರಗಿದೆ
ಹರಸು ಪ್ರೇಮವ ಎನ್ನೊಳಿರಿಸುತ ನೀನು ಮುದದಿಂದ
ವರವಿಶಾಲವು ಭರತ ಖಂಡವು
ಧರಣಿಯಗಲದಿ ಖ್ಯಾತಿ ಪಡೆದಿದೆ
ಪರಮ ತ್ಯಾಗಕೆ ಜ್ಞಾನ ಸಾಹಸ ಘನ ಪರಂಪರೆಗೆ

ಮನುಕುಲೋನ್ನತಿಯನ್ನು
ಬಯಸುತ
ವನದಿ ತ್ಯಾಗದ ಬದುಕ ನಡೆಸಿದ
ಮುನಿಕುಲದ ವಾರಿಧಿಗೆ ನೀನೇ
ಮೌನ ಪ್ರತಿನಿಧಿಯು
ಮಣಿದೆ ಶಿರವನು ನಿನ್ನಡಿಗೆ ನಾ ಮನದ ಕೊಳೆಯನು ತೊಳೆವ ಶ್ರೀಗುರು
ನನಗೆ ಗೆಲುವಿನ ಪಥವ ತೋರಿದ
ಜ್ಞಾನ ದ್ಯೋತಕವೇ

ನೀನು ತೋರಿದ ವೀರ ಪಥದಲಿ
ರಾಣ ಶಿವಭೂಪಾಲರಾದ್ಯರು
ಏನು ಸಾಹಸವನ್ನು ಮೆರೆದರು
ಶೌರ್ಯ ಸ್ಮರಣಿಕೆಯೇ
ನಾನು ಎಂಬುದನೆಲ್ಲ ಮರೆತೆನು
ನೀನು ದರುಶನವಿತ್ತ ಮಾತ್ರದಿ
ಲೀನನಾದೆನು ನಿನ್ನೊಳಗೆ
ನಾನೆಲ್ಲವರ್ಪಿಸುತ

Leave a Reply

Your email address will not be published. Required fields are marked *