ತರುಣ ಬಲದ ಜಲಧಿ ಭರದಿ

ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ
ಭರತ ಭುವಿಯ ಭಾಗ್ಯದ್ವಾರವಿಂದು ತೆರೆದಿದೆ
ಬಿಂದು ಬಿಂದು ಸಿಂಧುವಾಗಿ ಉಕ್ಕಿ ಮೊರೆದಿದೆ
ಹಿಂದು ಹಿಂದು ಎಂಬ ಘೋಷ ಮುಗಿಲಮುಟ್ಟಿದೆ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಅಮರ ನಿನ್ನ ಕೀರುತಿ || ಪ ||

ಕಷ್ಟನಷ್ಟವೇನೆ ಬರಲಿ ನಿಷ್ಠೆ ಎಮದು ರಾಷ್ಟ್ರಕೆ
ಭ್ರಷ್ಟರನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ
ಧೂರ್ತ ಶತ್ರುಗಳನು ಮೆಟ್ಟಿ ಚೆಂಡಾಡುತ ರುಂಡವ
ಗೈವೆವಿಂದು ಸಮರ ಭೂಮಿಯಲ್ಲಿ ರುದ್ರತಾಂಡವ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಇದೊ ಪ್ರಾಣದಾಹುತಿ || 1 ||

ಬರಿದೆ ಶಾಂತಿ ಮಂತ್ರ ಜಪಿಸಿ ಕುಳಿತರೇನು ಸಾರ್ಥಕ ?
ವ್ಯಕ್ತಿ ವ್ಯಕ್ತಿಯಾಗಲಿಂದು ರಾಷ್ಟ್ರಭಕ್ತ ಸೈನಿಕ
ಸಂಘರ್ಷದ ಸಮಯದಲ್ಲಿ ಹೇಡಿತನವು ಸಲ್ಲದು
ಸ್ವಾಭಿಮಾನಿ ಯುವಜನಾಂಗ ಸೋಲನೆಂದು ಒಲ್ಲದು
ಜೈ ಭಾರತಿ ಜೈ ಭಾರತಿ ಜೈ ಭಾರತಿ ನಿನಗೆ ಜಯದ ಆರತಿ || 2 ||

ಹಿಂದು ಶಕ್ತಿಯಿಂದ ಮುಕ್ತಿ ಜಗದ ಜನರ ಅಳಲಿಗೆ
ಹಿಂದು ತತ್ವದಿಂದ ಮಾತ್ರ ಮನುಜ ಕುಲದ ಏಳಿಗೆ
ನಿದ್ದೆ ತೊರೆದು ಎದ್ದು ಬನ್ನಿ ಕೋಟಿ ಹಿಂದು ತರುಣರೆ
ಬದ್ಧರಾಗಿ ಧ್ಯೇಯಕಿಂದು ಸಾಟಿಯಿಲ್ಲದರುಣರೆ
ಜೈ ಭಾರತಿ ಜೈ ಭಾರತಿ ಜೈ ಭಾರತಿ ಈ ಜಗದ ಸಾರಥಿ || 3 ||

Leave a Reply

Your email address will not be published. Required fields are marked *