ವಿಮಲ ಮಾತೆ, ಪ್ರೇಮ ದಾತೆ

ವಿಮಲ ಮಾತೆ ಪ್ರೇಮ ದಾತೆ | ದೇವಿ ಜನನಿ ಭಾರತೀ || ಪ ||

ಧವಳ ತೇಜ ಕೇಶರಾಶಿ | ದಿವ್ಯ ಮುಕುಟಧಾರಿಣಿ
ಗಿರಿಜನೇತ್ರೆ ಅಚಲಪಾಲೆ ಭವ್ಯ ವದನ ಮಾನಿನೀ || 1 ||

ಸಿಂಧು ಜಲದಿ ವಿಪುಲಧಾರೆ | ಶುಭ್ರಜಲಜ ಚುಂಬಿನೀ
ನಿರುತ ನೀಲ ವರ್ಣರೂಪಿ | ಚತುರ ಸೀಮ ಚಾರಿಣೀ || 2 ||

ಸ್ವರ್ಣ ಸೂರ್ಯ ಕೀರ್ತಿ ಕಿರಣ | ಪೂರ್ಣ ತೇಜ ವಂದಿತೆ
ಸೋಮ ಸುಧಾ ವರ್ಷ ಭರಿತ | ರಜತ ರಜನಿ ರಂಜಿತೆ || 3 ||

ಸಿಂಧು ಗಂಗ ಯಮುನ ವಾರಿ | ಬ್ರಹ್ಮಪುತ್ರ ನರ್ಮದಾ
ತುಂಗ ಗೋದ ಕಾವೇರಿ | ಪುಣ್ಯ ಅಮೃತವಾಹಿನೀ || 4 ||

ಜ್ಞಾನಶೀಲ ತತ್ವಸತ್ವ | ಅತುಳ ಭುವನ ಮೋಹಿನೀ
ದೇವ ಧರ್ಮ ಕರ್ಮ ದೇವಿ | ಅಮರ ಚರಿತೆ ಭಾರತೀ || 5 ||

Leave a Reply

Your email address will not be published. Required fields are marked *