ಜಯೋಸ್ತು ತೇ ಜಯೋಸ್ತು ತೇ (ಕನ್ನಡ)

ಜಯೋಸ್ತು ತೇ ಜಯೋಸ್ತು ತೇ ಶ್ರೀ ಸ್ವತಂತ್ರ ತೇ || ಪ ||

ಶ್ರೀ ಮಹನ್ಮಂಗಳೆ ಶುಭಗುಣಸನ್ನು ತಳೆ ಜಯ ನಿನಗೆ
ಯಶೋವನಿತೆ ಸ್ವಾತಂತ್ರ್ಯ ಭಗವತಿಯೇ ನಮೋ ನಿನ್ನಡಿಗೆ
ನೀತಿಸಂಪನ್ನೆ ರಾಷ್ಟ್ರೀಯ ಚೇತನದ ಮೂರ್ತಿ ಹೇ
ಸ್ವಾತಂತ್ರ್ಯ ಭಗವತಿಯೆ ಸನ್ಮತಿಯೆ ಸಾಮ್ರಾಜ್ಞಿ ರೂಪೆ || 1 ||

ಅವುದಾವುದುತ್ತಮ ಉದಾತ್ತ ಮಹನ್ಮಧುರವೋ
ಸ್ವಾತಂತ್ರ ಭಗವತಿಯೆ ನಿನ್ನದಹುದದು ಪರಿವಾರವು
ಯೋಗಿಜನ ಘೋಷಿಸುವ ಮೋಕ್ಷ ಮುಕ್ತಿಗಳೆಲ್ಲವು
ಸ್ವಾತಂತ್ರ ಭಗವತಿಯೆ ನೀನೆ, ನೀ ಪರಬ್ರಹ್ಮವು || 2 ||

ಹೇ ಶತ್ರುರಕ್ತರಂಜಿತೆ, ಸುಜನಪೂಜಿತೆ, ಶ್ರೀ ಸ್ವತಂತ್ರತೆ
ನಿನಗಾಗಿ ಮರಣವದುವೆ ಜನನ
ನೀನಿರದ ಜನ್ಮವಹುದು ಮರಣ
ನಿನಗಿದೀ ಜೀವನ ಸಮರ್ಪಣ || 3 ||

ಬಾಹು ನೀಡಿ ಭರತಭೂಮಿಯನು ಬಿಡದಾಲಿಂಗಿಸು
ಸ್ವಾತಂತ್ರ್ಯ ಭಗವತಿಯೆ ಸಾಷ್ಟಾಂಗ ನಮನ ಸ್ವೀಕರಿಸು || 4 ||

3 thoughts on “ಜಯೋಸ್ತು ತೇ ಜಯೋಸ್ತು ತೇ (ಕನ್ನಡ)

Leave a Reply

Your email address will not be published. Required fields are marked *