ಪಾಂಚಜನ್ಯದ ಕರೆಗೆ ಕರಗಿತು

ಪಾಂಚಜನ್ಯದ ಕರೆಗೆ ಕರಗಿತು
ದ್ವಾಪರದ ಆ ಕುರುಕುಲ
ಹರಿಯು ಉರಿಸಿದ ಧ್ಯೇಯ ದೀಪ್ತಿಗೆ
ಬೆಳಗಿ ಧರ್ಮದ ದೇಗುಲ || ಪ ||

ಅವನ ಕೆಲಸಕೆ ಮತ್ತೆ ಹೊರಟಿದೆ
ಭರತ ಖಂಡ ಮನುಕುಲ
ಮಾತೃ ವ್ಯಾಕುಲ ಕಳೆಯೆ ಕಲೆತಿದೆ
ಕಲಿಯ ಕಲಿಗಳ ಸಂಕುಲ || 1 ||

ಬೆರಳು ನಲಿಯಲು ಉಲಿವ ಕೊಳಲಲು
ಸ್ವಾಭಿಮಾನದ ಸರಿಗಮ
ಏರು ಇಳಿತದ ಸಪ್ತಸ್ವರದಲಿ
ಸಾಮರಸ್ಯದ ಸಂಗಮ || 2 ||

ಪಣವ ಆನಕ ಶಂಖ ಗೋಮುಖ
ರಣದ ಭೇರಿಯ ವಾದನ
ಸ್ಫೂರ್ತಿ ಪ್ರಣತಿಯ ಬೆಳಗಿ ಮಾತೆಯ
ಚರಣಕಿದೋ ಅಭಿವಾದನ || 3 ||

ಅರಿಯ ತರಿಯುತ ಜಗದಿ ಮೆರೆಯುವ
ವೀರವಾಂಛೆಯ ಧಾರಣ
ಕದನ ಕಣಕೆದುರಾಗಿ ಹೊರಟಿಹ
ವಿಜಯ ರಥದಾರೋಹಣ || 4 ||

Leave a Reply

Your email address will not be published. Required fields are marked *