ಜಯ ಜಯ ಜಯ ರಘುವೀರ

ಜಯ ಜಯ ಜಯ ರಘುವೀರ
ಹರ ಹರ ಹರ ಮಹದೇವ || ಪ ||

ಪಡುಗಡಲಿನ ತೆರೆ ದಡಗಳ ಬಡಿದು
ಕರೆಯುದ್ದಕು ಜಯಭೇರಿಯ ಹೊಡೆದು
ಹಾಡುತಲಿರುವುದ ನಾವಾಲಿಸುವಾ
ಎಲ್ಲರ ಕಂಠವ ಜತೆಗೂಡಿಸುವಾ || 1 ||

ಗಡಗಳ ನಡುವಿನ ಹೆಗ್ಗಾಡಿನಲಿ
ಮೊರೆಯುವ ಬಿರುಗಾಳಿಯ ಹುಯ್ಲಿನಲಿ
ಕಗ್ಗಲ್ಲಿನ ನೀರವ ಸುಯ್ಲಿನಲಿ
ಏನದು ಕೇಳ್ವದು ವನದನಿಗಳಲಿ || 2 ||

ಶಿವನಶ್ವದ ರಣ ಕುಣಿತದ ಗೀತ
ಸ್ವಾಮಿ ಸಮರ್ಥರ ಸುರ ಸಂಗೀತ
ರಣವಾಸಿಯದೀ ವೀರೋದ್ಘೋಷ
ಸನ್ಯಾಸಿಯ ಒಲವಿನ ಹೃದ್ಘೋಷ || 3 ||

ಹಿಂದೂ ಸ್ವಾತಂತ್ರ್ಯದ ಕ್ರಾಂತಿಪದ
ಪರಿಚಯ ನುಡಿ ಜಾಗೃತ ಭಾರತದ
ಭೋರಿಡಲಿ ನಿರಾಶೆಯ ಅಡಗಿಸುತ
ವೈರಿಯ ಎದೆ ಗಡಗಡ ನಡುಗಿಸುತ || 4 ||

Leave a Reply

Your email address will not be published. Required fields are marked *