ಎಲ್ಲಾ ಭೇದ ಮರೆತು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ          || ಪ ||

ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ           || 1 ||

ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಉತ್ಸಾಹದಿನಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೇ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು || 2 ||

ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೇ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೇ ರಕ್ತವು ನಮ್ಮಲಿ ಭೇದವು ಏಕಾಗಿ         || 3 ||

3 thoughts on “ಎಲ್ಲಾ ಭೇದ ಮರೆತು

  1. typing mistake
    Wrong: ಮನ ಮಾಡಿಂದು ದುಡಿಯಲು ಬಂಧು ಉತ್ಸಾಹದಿನಿಂದು

    Correct: ಮನ ಮಾಡಿಂದು ದುಡಿಯಲು ಬಂದು ಆಲಸ ಬಿದುತಿಂದು.

Leave a Reply

Your email address will not be published. Required fields are marked *