ಯುವಶಕ್ತಿಯು ಸಿಡಿದೇಳಲಿ

ಯುವಶಕ್ತಿಯು ಸಿಡಿದೇಳಲಿ ನವಭಾರತ ನಿರ್ಮಿತಿಗೆ
ಸುಮುಹೂರ್ತವು ಬಂದೊದಗಿದೆ ಘನಧ್ಯೇಯದ ಸ್ವೀಕೃತಿಗೆ |
ಸಚ್ಚರಿತೆಯ ಕಡಲಾಳದ ಬಡಬಾನಲವನ್ನು
ಬಡಿದೆಬ್ಬಿಸಿ ಎಚ್ಚರಿಸಲು ತಡವೇತಕೆ ಇನ್ನೂ? || ಪ ||

ಉತ್‍ಸ್ಫೂರ್ತಿಯ ಇತಿಹಾಸದ ಓ ವಾರಸುದಾರ
ಸತ್ಕೀರ್ತಿಯ ಹೆಗ್ಗುರಿಯೆಡೆ ಮುನ್ನುಗ್ಗುತ ಬಾರಾ
ಶತಶತಕದ ಹೊಂಗನಸನು ನನಸಾಗಿಸೊ ಈಗ
ಗತವೈಭವ ಮರುಗಳಿಕೆಗೆ ಹೊರಹೊಮ್ಮಲಿ ತ್ಯಾಗ || 1 ||

ಧಿಕ್ಕರಿಸುತ ರಕ್ಕಸತೆಯ ಪೈಶಾಚಿಕ ನೃತ್ಯ
ಹುಟ್ಟಿಳಿಸುತ ಧರ್ಮಾಂಧರ ದುರ್ಮಾಗದ ಕೃತ್ಯ
ನಯವಂಚಕ ಗೋಹಂತಕರಂತಿಮ ಕ್ಷಣ ಬಂತು
ಭಯ ಅಂಜಿಕೆ ಕಿತ್ತೆಸೆಯದೆ ನಾಡುಳಿಯುವುದೆಂತು? || 2 ||

ಹಿಂದುತ್ವದ ಬಂಧುತ್ವದ ಸಂಸ್ಕೃತಿಯಾದರ್ಶ
ಸುವಿಚಾರದ ಸಂಸ್ಕಾರದ ದಿವ್ಯಾಮೃತ ಸ್ಪರ್ಶ
ಮೈತಳೆಯುತ ಕಂಗೊಳಿಸಿದೆ ಸಂಘದ ವಟವೃಕ್ಷ
ಬೆಂಗಾಡನು ರಂಗೇರಿಪ ಸುರದುರ್ಲಭ ದೃಶ್ಯ || 3 ||

ವಿದ್ರೋಹದ ರಣಗರ್ಜನೆ ಸಮರಾಂಗಣದಲ್ಲಿ
ಮೊಳಗುತ್ತಿರೆ ಮೈಮರೆವಿಗೆ ಆಸ್ಪದವಿನ್ನೆಲ್ಲಿ?
ತ್ರೈಲೋಕದಿ ಬಿತ್ತರಿಸುತ ಸಂಘದ ಸಂದೇಶ
ಬಿಸಿನೆತ್ತರ ಅಲೆಅಲೆಯಲಿ ಅರಳಲಿ ಹೊಸದೇಶ || 4 ||

Leave a Reply

Your email address will not be published. Required fields are marked *