ಯುವಕರೆಲ್ಲ ಬನ್ನಿರಿ ವೀರಗಾನ ಮೊಳಗುವಾ

ಯುವಕರೆಲ್ಲ ಬನ್ನಿರಿ ವೀರಗಾನ ಮೊಳಗುವಾ
ಎಚ್ಚರಾಗಿ ಬನ್ನಿರಿ ಜನ್ಮಭೂಮಿ ಉಳಿಸುವಾ || ಪ ||

ವೇದಮಂತ್ರ ತುಂಬಿಬಂದ ರಾಷ್ಟ್ರವನ್ನು ಪಡೆಯುವಾ
ನಾಡಿನ ಶಾಂತಿಗಾಗಿ ಸೇವೆಗೈದು ಬದುಕುವಾ
ಸತ್ಯವಂತ ಹರಿಶ್ಚಂದ್ರ ಜನಿಸಿದ ಭೂಮಿಯಲಿ
ಧ್ಯೇಯದಾ ದಾರಿಹಿಡಿದು ರಾಮರಾಜ್ಯ ಕಟ್ಟುವಾ || 1 ||

ಮರಳಿ ಜ್ಞಾನಪಡೆದು ಮುಂದೆ ವೀರರಾಗಿ ಸಾಗುವಾ
ಹರಿದು ರಕ್ತ ತುಂಬಿಬರಲಿ ದೇಶಕಾಗಿ ಬದುಕುವಾ
ಬಂಧುಭಾವದಿಂದ ಮೆರೆದು ತಾಯಿನಾಡ ಉಳಿಸುವಾ
ಹಿಂದುಕುಲದ ಯುಗಯುಗದ ನೆನಪಿಗಾಗಿ ಬಾಳುವಾ|| 2 ||

ಹೆಮ್ಮೆಯಿಂದ ಎದೆಯನೆತ್ತಿ ಹಿಂದು ಎಂದು ನಡೆಯುವಾ
ಕಷ್ಟಗಳನು ಸಹಿಸುತೆಲ್ಲ ದುಷ್ಟಶಕ್ತಿ ತರಿಯುವಾ
ಹಿಂದುರಾಷ್ಟ್ರ ಬೆಳಗಲು ಸಂಘಶಕ್ತಿ ಪಡೆಯುವಾ
ಸಂಘ ಮಂತ್ರ ಹೇಳಿಕೊಟ್ಟ ಕೇಶವರ ಸ್ಮರಿಸುವಾ || 3 ||

Leave a Reply

Your email address will not be published. Required fields are marked *