ಯೋಗೇಶ್ವರ ಕೃಷ್ಣನಂತೆ

ಯೋಗೇಶ್ವರ ಕೃಷ್ಣನಂತೆ ರಾಷ್ಟ್ರಶಕ್ತಿ ಎದ್ದಿದೆ
ಧನುರ್ಧಾರಿ ಪಾರ್ಥನಂತೆ ವೀರ ಘೋಷ ಗೈದಿದೆ || ಪ ||

ಏಕಪುರುಷನಂತೆ ದೇಶ ತಲೆಯನೆತ್ತಿ ನಿಂತಿದೆ
ವೈರಿಗದು ಕಾಲಪಾಶವಾಗಿ ಕತ್ತು ಸುತ್ತಿದೆ || 1 ||

ಧರ್ಮವನ್ನೆ ಹಿಡಿದು, ತನ್ನ ಶೌರ್ಯಮೆರೆದ ವೈರಿಯು
ನಾಶವನ್ನು ಕರೆದು ಕರಗಿದಂತೆ ಆಯ್ತು ಕೃತ್ಯವು || 2 ||

ಜಗದ ಜನಸ್ತೋಮವೆಲ್ಲ ನಮ್ಮ ಹಿಂದೆ ನಿಂತಿದೆ
ಸತ್ಯಧರ್ಮ ಶಾಂತಿ ಪ್ರೀತಿ ನಮಗೆ ಶಕ್ತಿ ಇತ್ತಿದೆ || 3 ||

ದೇಶಕ್ಕಾಗಿ ಸರ್ವತ್ಯಾಗಗೈಯೆ ಜನರು ಸಿದ್ಧರು
ಅಂತಿಮ ಜಯ ನಮ್ಮದೆಂದು ಸ್ಪಷ್ಟವಾಗಿ ಬಲ್ಲರು || 4 ||

Leave a Reply

Your email address will not be published. Required fields are marked *