ಯಾವ ನೆಲದ ಗಂಧ ಗಾಳಿ

ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ || ಪ ||

ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ
ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ
ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ || 1 ||

ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ
ಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋ
ಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ || 2 ||

ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋ
ರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋ
ಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ || 3 ||

Leave a Reply

Your email address will not be published. Required fields are marked *