ವಿಶ್ವವನಾಹ್ವಾನಿಸುತಿರುವೆವಿದೋ – ಬರುವವರಿದ್ದರೆ
ಬರಲಿಲ್ಲಿಗೆ ಭಾರತಕೆಂದು
ಸ್ನೇಹಕು ಬದ್ಧರು ಸಮರಕು ಸಿದ್ಧರು ನಾವೆಂದು || ಪ ||
ಶತಶತಮಾನದ ಹಗೆಯುನ್ಮಾದದ ಕಾಲನ ಹೆಡೆಗಳ ಕಾಲಡಿ ತುಳಿದು
ನಿಂತ ಪರಂಪರೆ ಶತಶತ ಸಂಖ್ಯೆಯ ಸಮರವನೆದುರಿಸಿಯೂ ಇಲ್ಲುಳಿದು || 1 ||
ಬಾಯಾರಿದೆ ಬಾಯ್ದೆರೆದಿದೆ ಭಾರತ ಇದು ಚಿರದಾಹಿತ
ಜ್ವಾಲಾಮುಖಿಯು
ಅರಿದಹನಾತುರ ಘೋರ ಭಯಂಕರ ಉರಿಜಿಹ್ವೆಯ ಯಜ್ಞೇಶ್ವರ ಶಿಖೆಯು || 2 ||
ಹೊಂಗಿರಣದ ಹೇಮೋಜ್ವಲ ಕೇತನ ಸಾವನು ಸೋಲನು ದಹಿಸುತ ಬೆಳೆದು
ಇದೊ ಹಾರಿದೆ ನಭಕೇರಿದೆ ಭಗವಾ ಬಿಸಿನೆತ್ತರ ಭೀಷಣ ಸಿಂಗಾರದಿ
ಹೊಳೆದು || 3 ||
ಗತವೈಭವದಾರಾಧನೆ ವರ್ಧನೆ ಶತಶತ ನವಸಾಧನೆ ಜೊತೆ ಜೊತೆಗೆ
ನಿಜಸಂತಾನದ ಹೃತ್ಸಾಮ್ರಾಜ್ಯದ ಸಿಂಹಾಸನವಿದೊ – ಇದು ಭಾರತಿಗೆ || 4 ||