ವಿಜಯ ದುಂದುಭಿ ಮೊಳಗಲಿ
ಹೃದಯದಂಬುಧಿ ಮೊರೆಯಲಿ
ಧ್ಯೇಯ ಸೂರ್ಯನ ದಿವ್ಯ ಕಿರಣವು
ಭರತ ಭೂಮಿಯ ಬೆಳಗಲಿ ವಿಶ್ವವೇ ತಲೆಬಾಗಲಿ || ಪ ||
ಜಡತೆ ನೀಗುತ ಸತತ ಸಾಗುವ
ರಣೋತ್ಸಾಹವ ಮೂಡಿಸಿ
ನಾಡನೊಡೆಯುವ ಸಂಚು ಹೂಡಿಹ
ಶತ್ರುಗಳ ಬಡಿದೋಡಿಸಿ || 1 ||
ಸೋಲನೊಲ್ಲದೆ ನಡಿಗೆ ನಿಲ್ಲದೆ
ಗೆಲುವಿನ ಗುರಿ ಸೇರುತ
ಹಿಂದು ಭೂಮಿಯ ಕ್ಷಾತ್ರ ತೇಜವ
ದಿಗ್ದಿಗಂತಕೆ ಬೀರುತ || 2 ||
ತರುಣ ಶಕ್ತಿಯದಮ್ಯ ಸ್ಫೂರ್ತಿಗೆ
ಸಾಟಿ ಎಲ್ಲಿದೆ ಧರೆಯಲಿ ?
ಭಾರತಾಂಬೆಯ ಜಯಪತಾಕೆಯು
ನವೋಲ್ಲಾಸದಿ ಮೆರೆಯಲಿ || 3 ||