ಮರುಧರೆಯ ಮಣ್ಣಿನೊಳೆ ನಮ್ಮದಿದೆ

ಮರುಧರೆಯ ಮಣ್ಣಿನೊಳೆ ನಮ್ಮದಿದೆ ನವ ಸೃಷ್ಟಿ
ಕೃತಕೃತ್ಯಗೊಳಿಸೆಮ್ಮ ಓ ಸೃಷ್ಟಿಕರ್ತ ;
ಉರಿದುರಿವ ಕಣ್ಣಿನೊಳೆ ನಮ್ಮದಿದೆ ನವದೃಷ್ಟಿ
ಹರಸು ಹರಸೆಮ್ಮ ಓ ದೃಷ್ಟಿದಾತ ! || ಪ ||

ಪೂರ್ವಜರ ಹೂಂಕಾರ ಚೀತ್ಕಾರ ನರಳಿಕೆಯೆ
ಒಳಗೊಳಗೆ ಮೊಳೆಸಿರುವ ಕುದಿಕುದಿದು ಬೆಳೆಸಿರುವ
ಕಾಲಗರ್ಭದ ವ್ಯಥೆಗೆ ಧ್ವನಿಯವರ್ಧಕವಿಟ್ಟು –
ಹಂಪೆ ಹಳೆಬೀಡಿನಲಿ ಅಡಿಗಡಿಗು ಹರಡಿರುವ || 1 ||

ಕಲ್ಲು ಕಲ್ಲಿನ ಕಥೆಗೆ ಹೊಸ ಬಾನುಲಿಯನಿಟ್ಟು-
ಇತಿಹಾಸದುದ್ದಕ್ಕೂ ಕೊಲೆ ಸುಲಿಗೆಗೊಳಗಾದ
ತಲೆ ತೆತ್ತು ಬಲಿಯಾದ ದೈತ್ಯರತ್ಯಾಚಾರಕಾಹಾರವಾದ
ಬಂಧು ಭಗಿನಿಯರೊಡಲ ಸಂಕಟದ ಬೆಂಕಿಯನು
ಕೆದಕಿ ಬೂದಿಯನೂದಿ ನಡೆವೆವಿದೊ ನವಹಾದಿ ! || 2 ||

ಪೂರ್ವ ಪಶ್ಚಿಮದಲ್ಲಿ ಶ್ವಾನ ಪಾಕಿಸ್ತಾನ
ಉತ್ತರದಿ ಕಡುವೈರಿ ಕೆಂಪು ಚೀನ
ದಕ್ಷಿಣದ ತುದಿಯಲ್ಲು ಕ್ರಿಸ್ತಹಂತಕರ ಶಿಲುಬೆಯಾಹ್ವಾನ !
ಬೇಕೆಮಗು ಯಜ್ಞಕ್ಕೆ ಮರಿ ಹಂದಿ ಕುರಿ ಕೋಣ
ಕಾದಿಹೆವು ಅಧ್ವರ್ಯು ಉದ್ಗಾತೃ ಹೋತೃಗಣ !
ಮೂಡಿಹುದು ನವದೃಷ್ಟಿ ನಡೆದಿಹುದು ನವಸೃಷ್ಟಿ || 3 ||

ಮೃದು ಹೃದಯ ತಟ್ಟಿ ಕಲ್ಲೆದೆಯ ಕುಟ್ಟಿ;
ವ್ಯಷ್ಟಿಯಂ ಪರಮೇಷ್ಟಿಯೆಡೆಗೊಯ್ದು ಮುಟ್ಟಿಸುವ
ಸ್ವಾರ್ಥ ಮೇಷದ ಮೇಧ ಧರ್ಮಸಂತುಷ್ಟಿ;
ಭಯ ದಾಸ್ಯ ದೈನ್ಯತೆಯ ಬೇರುಗಳ ಕಿತ್ತೆಸೆದು
ವೈರಿಯಶ್ವದ ಮೇಧ ರಾಷ್ಟ್ರಕಾಮೇಷ್ಟಿ ! || 4 ||

Leave a Reply

Your email address will not be published. Required fields are marked *