ಉತ್ತರದುನ್ನತ ಹಿಮವತ್ಪರ್ವತ
ದೆತ್ತರ ಬೆಳೆದಿಹ ಹೇ ಸಂತ
ಸಂತಮಹಂತರ ಏಕತೆ ಸಾಧಿಸಿ
ವಿಷಮತೆ ನೀಗಿದ ಧೀಮಂತ || ಪ ||
ಸಂತತ ಚಿಂತನ ಮಂಥನದಿಂದ
ಉದಿಸಿತು ವಿಚಾರ ನವನೀತ
ಸಂಘದ ಗಂಗೆಯ ಸುಂದರ ತಟದಲಿ
ಸಮರಸತೆಯ ಸುರ ಸಂಗೀತ || 1 ||
ಬ್ರಹ್ಮಬಲದ ಜೊತೆ ಕ್ಷಾತ್ರ ಕಠೋರತೆ
ಅನುದಿನ ಶಕ್ತಿಯ ಸಂಚಯನ
ನಿರ್ಮೋಹತ್ವವು ನಿರಹಂಕಾರವು
ಅಗಣಿತ ಗುಣಗಳ ಸಮ್ಮಿಲನ || 2 ||
ರಾಘವನಂದದಿ ಮಾರ್ಗವ ತೋರಿದೆ
ಮೌಲ್ಯಾದರ್ಶಗಳಾಚರಿಸಿ
ಮಾಧವ ತವ ಪದ ವಿರಚಿತ ಪಥದಲಿ
ಕ್ರಮಿಸುವೆವಿದೋ ನಾವನುಸರಿಸಿ || 3 ||