ಉತ್ತರದೊಳು ಹರಿದಿಹ ಅನುಜರ ನೆತ್ತರಿಗೆ

ಉತ್ತರದೊಳು ಹರಿದಿಹ ಅನುಜರ ನೆತ್ತರಿಗೆ
ಸೇಡಿನ ಕಿಡಿ ಆಹುತಿಯನು ಬಯಸುತಿದೆ || ಪ ||

ಗರ್ಜಿಸುತಿದೆ ಶತಶತಮಾನದ ನಮ್ಮಿತಿಹಾಸ
ಏನಿಂತಾಯಿತೆ ಮೈಮರೆಯಿತೆ ಭಾರತದೇಶ ?
ಸದ್ದುಡುಗಿತೆ ಸತ್ತಡಗಿತೆ ಪೌರುಷದಾದೇಶ ?
ಅಳಿಯಿತೆ ಮಾನವ ಮಾರದ ಮಾನವರಾವೇಶ ? || 1 ||

ಸ್ವಾರ್ಥವು ಕುಳಿತಿತೆ ಶ್ರೀ ಹರ್ಷನ ಸಿಂಹಾಸನದಿ ?
ಷಂಡತ್ವದ ನೆಲೆಯಾಯಿತೆ ನವದಿಲ್ಲಿಯ ಗಾದಿ ?
ಧೃತಿಮತಿ ಇಲ್ಲದವರಿಗಾಗಲಿ ಬೀಳ್ಕೊಡುಗೆ
ಮೇಲೇರಲಿ ಸತ್ಪುತ್ರರು ನಾಡಿನ ಮುನ್ನಡೆಗೆ
ನವಯುವಕರೆ ಸ್ವೀಕರಿಸಿರಿ ಬನ್ನಿರಿ ಆಹ್ವಾನ
ಸಂರಕ್ಷಿಸಿ ನಿಮ್ಮನು ಬೆಳೆಸಿದ ಭೂಮಿಯ ಮಾನ !|| 2 ||

Leave a Reply

Your email address will not be published. Required fields are marked *