ತುಂಗ ಹಿಮಾಲಯ ಶೃಂಗವಿಲಾಸಿನಿ ಮಂಜುಳವಾಹಿನಿ ಗಂಗಾ
ಪುಂಗವಪೂಜಿತ ಮಂಗಲದಾಯಿನಿ ನಿನ್ನಯ ಕೀರ್ತಿ ಅಭಂಗ |
ಬಾ ನಲಿದಾಡುತ ಬಾ || || ಪ ||
ಪರಮೇಶ್ವರ ಹರನರಗಿಣಿ ನೀನು
ಕಲಕಲನಾದ ತರಂಗಿಣಿ ನೀನು
ಭಾರತ ಹೃದಯ ವಿಹಾರಿಣಿ ನೀನು
ಅಗಣಿತ ಭಾಗ್ಯಪ್ರದಾಯಿನಿ ನೀನು
ಬಾ ನಲಿದಾಡುತ ಬಾ || 1 ||
ಸಾಧಕರಿಗೆ ಭವತಾರಿಣಿಯಾಗಿ
ಪೂಜಕರಿಗೆ ಅಘನಾಶಿನಿಯಾಗಿ
ನಾಡಿನ ತಾಪ ನಿವಾರಿಣಿಯಾಗಿ
ಕಶ್ಮಲ ಕಲಿ ಸಂಹಾರಿಣಿಯಾಗಿ
ಬಾ ನಲಿದಾಡುತ ಬಾ || 2 ||
ಹಿಂದು ಸಮಾಜದ ಕುಂದನು ಅಳಿಸಲು
ವಿಂಧ್ಯನ ಬಳಸುತ ಬರುವೆಯೆ ನೀನು ?
ಸಂಘಪ್ರವಾಹದಿ ಸಂಗಮಗೊಂಡು
ಸ್ಫೂರ್ತಿಯ ಹೊನಲನು ಹರಿಸುವೆಯೇನು ?
ಬಾ ನಲಿದಾಡುತ ಬಾ || 3 ||
ಗಂಗೋತ್ರಿಯ ಸಂಘೋತ್ರಿಯ ಬಂಧ
ಹೈಮಾದ್ರಿಯ ಸಹ್ಯಾದ್ರಿಯ ವೃಂದ
ಮಲಯಾದ್ರಿಯ ವನಸಿರಿ ಸೌಗಂಧ
ತಂದಿದೆ ಹಿಂದುವಿಗಮಿತಾನಂದ
ಬಾ ನಲಿದಾಡುತ ಬಾ || 4 ||