ತುಂಬಿದೆ ದೇಶವ ಒಡೆಯುವ ಭ್ರಷ್ಟತೆ
ಕೆಟ್ಟಿತೆ ಶಾಸಕರದು ದೃಷ್ಟಿ ?
ಮೈತಾಳಿತು ನಾಗಾದೇಶವಿದೋ –
ನಾಯಕ ಮುಖ್ಯನ ನವಸೃಷ್ಟಿ ! || ಪ ||
ಹುಟ್ಟಿದ ದಿವಸಕೆ ಹೆಣಗಳ ಕಾಣಿಕೆ
ದಿನಬೆಳಗಾದರೆ ಅಪಮಾನ !
ದಿನದಿನವೂ ಕಿರಿದಾಗುತಲಿದೆ ನೆಲ
ಒಳನುಗ್ಗುತಲಿದೆ ನವಚೀನ ! || 1 ||
ಕಾರಣ ಸರಕಾರದ ಸಂಧಾನಕೆ
ನಾಡಿನ ಗಡಿಗಳೊಳಜ್ಞಾನ
ಸ್ವಾರ್ಥದ ಜನರೊಂದೆಡೆ, ಮತ್ತೊಂದೆಡೆ
ಮಣ್ಗೂಡಿದೆ ರಾಷ್ಟ್ರದ ಮಾನ ! || 2 ||
ಕಿಂದರಿ ಗೀತೆಯು ಕೋಣನಿಗೇತಕೆ
ಸಾಕಾಯಿತು ಕೇಳೀ ಕೇಳಿ !
ಮುಗಿಯಲಿ ಕೊಳಲು ಪಿಟೀಲಿನ ವಾದನ
ಶೀಲಗಳೈದರ ರೋದನವು || 3 ||
ಗಂಗಾ ಭಗಿನಿಯ ಸಂಗವ ತೊರೆದಿಹ
ಸಿಂಧೂಜಲ ಬಾಯಾರುತಿದೆ !
ಬಂಗಾಲವ ಭಂಗಿಸಿದಪರಾಧಕೆ
ಭಾರತ ನೆತ್ತರ ಕಾರುತಿದೆ ! || 4 ||
ಯಮುನೆಯ ಜಲದೊಳು ಮುಳುಗಲಿ ಮುರಲಿಯು
ಬಾರೀಕಡೆ ಮುರಲೀಧರನೆ
ಕಂಸ ಜರಾಸಂಧರು ಕರೆವರು ಬಾ
ಸಮರಕೆ ಚಕ್ರಗದಾಧರನೆ ! || 5 ||