ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು || ಪ ||
ಆಗಸದ ವೈಶಾಲ್ಯ ಸಾಗರದ ಗಾಂಭೀರ್ಯ
ಹಿಮಗಿರಿಯ ವರಸ್ಥೈರ್ಯ ಮೂರ್ತಿಮಂತನೆ ನಿನಗೆ || 1 ||
ಹೃದಯದ ಔದಾರ್ಯ ಮಮತೆಯ ಮಾಧುರ್ಯ
ಸಂಘಟನ ಚಾತುರ್ಯ ಮಾರ್ಗದರ್ಶಕ ನಿನಗೆ || 2 ||
ಕೇಶವನ ಪ್ರತಿಬಿಂಬ ರಾಷ್ಟ್ರದೀಪದ ಸ್ತಂಭ
ದೇಶಭಕ್ತಿಯ ಕುಂಭ ಶಕ್ತಿದಾತನೆ ನಿನಗೆ || 3 ||
ಸಂಸ್ಕೃತಿಯ ಸುವಿಚಾರ ಋಷಿವರ್ಯರಾಚಾರ
ಭವಿತವ್ಯದುಚ್ಚಾರ ಯೋಗಿವರ್ಯನೆ ನಿನಗೆ || 4 ||
ಜಯಜಯವು ಭಾರತಿಗೆ ಜಯಜಯವು ಕೇಶವಗೆ
ಜಯಜಯವು ಮಾಧವಗೆ ಚಿರ ಸುಯೋಗವು ನಿನಗೆ || 5 ||