ಸುರಿಯಲಿ ತಂಪೆರೆಯಲಿ ಜೀವನಪ್ರೀತಿಯ ಮಳೆ
ಹರಿಯಲಿ ಭೋರ್ಗರೆಯಲಿ ಬತ್ತಿದೆಡೆಗಳಲೀ ಹೊಳೆ
ಕೊಚ್ಚಿಹೋಗಲಿ ಸ್ವಾರ್ಥ ದುರಾಸೆ ಸ್ವಚ್ಛವಾಗಲಿ ಇಳೆ || ಪ ||
ಚಿಮ್ಮಲಿ ಹಚ್ಚನೆ ಹಸಿರು ನಿರ್ಮಲವಾಗಲಿ ಉಸಿರು
ಮತ್ತೆ ಆಗಲಿ ವಸುಂಧರೆ ಸಕಲ ಜೀವಿಗಳಿಗಾಸರೆ
…ಕೊಚ್ಚಿಹೋಗಲಿ || 1 ||
ಧುಮ್ಮಿಕ್ಕಿ ಧುಮುಕಿ ಜಲಪಾತ ನೀಡಿ ಜಡತೆಗೆ ಆಘಾತ
ಹೊಮ್ಮಿಸಲಿ ಹೊಸಚೇತನ ಕ್ರಿಯಾಶೀಲತೆಗೆ ಇಂಧನ
…ಕೊಚ್ಚಿಹೋಗಲಿ || 2 ||
ತೊನೆಯಲಿ ತೆನೆ ಹೊಂದೇರು ಅಡಗಲಿ ಹಸಿವಿನ ಚೀರು
ಅರಳಲಿ ಎಲ್ಲೆಡೆ ಹೂನಗೆ ಹಾಯ್ ಎನಿಸಲಿ ಭೂತಾಯಿಗೆ
… ಕೊಚ್ಚಿಹೋಗಲಿ || 3 ||