ಸೊಂಟ ಕಟ್ಟಿ ಹೊಂಟೆವಿದೋ ಮುಂದಕೆ
ತಂಟೆಯಳಿಸಿ ತಾಯ ಆನಂದಕೆ
ಎಂಟುದಿಕ್ಕಿನಿಂದ ಬರುವ ಕಂಟಕಗಳ ಕಳೆದು
ಎಂಟೆದೆಯ ಬಂಟರೆಲ್ಲ ಚಂದಕೆ || ಪ ||
ನಮ್ಮ ಮಾತೆ ನಮ್ಮ ಭರತಮಾತೆ ಸರ್ವಲೋಕವಂದಿತೆ
ಜಗದ ಮನವ ಜಗದ ಜನರ ಮನವ ಸೆಳೆದ ಗೌರವಾನ್ವಿತೆ
ಆದಿ ಅಂತ್ಯ ವಿರಹಿತೆ, ಸಾಧುರೂಪ ಸಂಹಿತೆ
ಅವಳ ಹರಕೆ ಸ್ಫೂರ್ತಿ ನಮಗೆ ಕಾರ್ಯಕೇ || 2 ||
ತಡೆಯಬೇಡ ತಡೆದು ಹಿಡಿಯಬೇಡ ನಮ್ಮ ಎದೆ ಹಿಮಾಲಯ
ಜಗ್ಗಲರಿಯ ತಾನು ಬಗ್ಗಲರಿಯ ನಮ್ಮ ಶಕ್ತಿ ಅಕ್ಷಯ
ನಿನ್ನ ಹೆಜ್ಜೆ ತಾಳಕೆ ಸಿದ್ಧವಿಹುದು ಭೂಮಿಕೆ
ಎದ್ದು ಬಾರೋ ವ್ಯರ್ಥ ತಡವಿದೇತಕೇ || 3 ||
ಹರಸಿದವರು ಹರಸಿ ಕಳಿಸಿದವರು ನಮ್ಮ ತಂದೆ ತಾಯ್ಗಳು
ನುಡಿಸಿದವರು ನುಡಿಸಿ ನಡೆಸಿದವರು ಪೂರ್ವ ಪಿತರ ಕೈಗಳು
ಕೇಶವನ ಸೂತ್ರಕೆ ಮಾಧವನ ಭಾಷ್ಯಕೆ
ಮೂರ್ತರೂಪ ಕೊಡಲು ಇದೋ ಸಿದ್ಧತೆ || 4 ||