ಸ್ಮೃತಿಸಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ
ಅಗ್ನಿವರ್ಣದ ಜ್ಞಾನಕಿರಣದ ಜೀವಭೃಂಗಾರವೆ ನಮೋ || ಪ ||
ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ
ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ
ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ
ಸತ್ವ ಸಂಗೀತವೇ ನಮೋ || 1 ||
ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ
ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ
ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು
ಜೀವನವೆ ನೈವೇದ್ಯವು || 2 ||
ಮೋಹ ಮಾಯೆಯ ನೆರಳ ಗುಡಿಸುತ ಸತ್ಯದರ್ಶನ ಮಾಡಿಸಿ
ಅರಿವುಗೇಡಿನ ಇರುಳ ಮಡಿಸುತ ಜ್ಞಾನಸೂರ್ಯನ ಮೂಡಿಸಿ
ಹಿಂದು ಸಂತತಿಗಿಂದು ನೆನಪಿಸು ಮತ್ತೆ ಗೆಲ್ಲುವ ಮಾರ್ಗವ
ಮರ್ತ್ಯದಿಂದಲಮರ್ತ್ಯವ || 3 ||