ಶತಶತಮಾನದ ಕನಸಿನ ಬಿತ್ತು

ಶತಶತಮಾನದ ಕನಸಿನ ಬಿತ್ತು
ಹೊಸಬೆಳಕಿಗೆ ಕಣ್ದೆರೆಯುವ ಹೊತ್ತು
ಪಲ್ಲವಿಸಲಿ ಸಂವರ್ಧಿತವಾಗಲಿ
ನೆತ್ತರು ಬೆವರಿನಲಿ – ಸಾಹಸ ಚರಿತದಲಿ || ಪ ||

ಮಳಲನು ಸುರಿಯಲಿ ಅಳಿಲಿನ ಭಕ್ತಿ
ಶಿಲೆ ಬಂಡೆಗಳನು ಹನುಮನ ಶಕ್ತಿ
ಜಲಧಿಗೆ ಸೇತುವೆ ಅಳಿಯದ ಕೀರ್ತಿ
ಒಲಿವುದು ಪರದೈವ – ಸಲಿಸಲು ಕರ್ತವ್ಯ || 1 ||

ಹಿಗ್ಗದೆ ಜಯಹಾರಕೆ ಹೊಗಳಿಕೆಗೆ
ಕುಗ್ಗದೆ ಸೋಲಿಗೆ ನಿಂದೆಯ ನುಡಿಗೆ
ಒಗ್ಗುತ ಸಂಘದ ರೀತಿಗೆ ನೀತಿಗೆ
ಅರ್ಪಿತವೆನ್ನೋಣ – ತನು ಮನ ಧನ ಪ್ರಾಣ || 2 ||

ಅಹಂಭಾವ ಮತ್ಸರಗಳ ನೀಗಿ
ನಿರಪೇಕ್ಷೆಯ ನಿಜಯೋಗಿಗಳಾಗಿ
ಧ್ಯೇಯಾದರ್ಶದ ದೀಪಗಳಗಣಿತ
ಬೆಳಗುವ ಪರ್ಯಂತ – ಸಾಧನೆ ಅನವರತ || 3 ||

Leave a Reply

Your email address will not be published. Required fields are marked *