ಶಕ್ತಿಸ್ವರೂಪಿಣಿ ಭಾರತಮಾತೆಯ

ಶಕ್ತಿಸ್ವರೂಪಿಣಿ ಭಾರತಮಾತೆಯ ದುರ್ಜಯ ಪುನರವತಾರ
ಮೂಡುತ್ತಿದೆ ಭಾರತದಲ್ಲೆಲ್ಲೆಡೆ ನವಚೈತನ್ಯದ ಸಂಚಾರ || ಪ ||

ಮಕ್ಕಳ ಮೈಮರೆವಿನ ಯುಗ ಕಳೆದಿದೆ ಅಳಿದಿದೆ ಅಳುಕಿನ ತಿಮಿರ
ಏಕಾತ್ಮತೆಯರುಣ ಪ್ರಭೆ ಮೂಡಿದೆ ಅಡಗಿದೆ ಒಡಕಿನ ಕುಹಕ
ಶತ್ರುವಿನಾಶದ ಆಶ್ವಾಸನೆಯಿದೆ ಜಗಕಿದೆ ಶಾಂತಿಯ ಶಪಥ
ವಿಜಯದ ಗಳಿಗೆಯಿದೋ ಸಮೀಪಿಸಿದೆ ಮುನ್ನುಗ್ಗಿದೆ ಯುವಪಥಕ || 1 ||

ಸಾವಿಲ್ಲದ ನಾಡಿನ ಸುತರೆದ್ದರು ಯಜ್ಞದ ಸಿದ್ಧತೆಗೆ
ಹಿಂದುತ್ವದಮರ ಗಂಗೆ ಹರಿದಿದೆ ಸೃಷ್ಟಿಯ ಏಳಿಗೆಗೆ
ಯುಗಯುಗಗಳ ಇತಿಹಾಸದ ವಿಜಯದ ವೈಭವ ಶಿಖರಕ್ಕೆ
ನವ ಇತಿಹಾಸದ ಧ್ವಜವನೇರಿಸುವ ಉತ್ಸಾಹದ ರಭಸಕ್ಕೆ || 2 ||

ಜಡವಾದದ ಮೌಢ್ಯದ ಕ್ರೌರ್ಯದ ಸಂಚಿನ ಕಂತೆಗೆ ಕೊನೆ ಹೇಳಿ
ತ್ಯಾಗ ಶೀಲ ವಿಶ್ವಾಸದ ಶ್ರದ್ಧೆಯ ಕಹಳೆಯಿದೋ ಕೇಳಿ
ಹಿಂದು ರಾಷ್ಟ್ರದ ಹೊಸ ಮುಂಜಾವಿನ ಮಂಗಳಕ್ಷಣ ಬಂದಿದೆ ಏಳಿ
ಜಗದೆಲ್ಲಡೆಯ ಜಡತೆಯ ತೊಡೆಯುವ ದಾಯಿತ್ವಕೇ ಮೈತಾಳಿ || 3 ||

One thought on “ಶಕ್ತಿಸ್ವರೂಪಿಣಿ ಭಾರತಮಾತೆಯ

  1. Vande Mataram,

    Hubballiyalli naanu vaasisuttiddaaga, ‘Narendra’ avaru bayasiddakkaagi, ee haadannu Shailaja Pai avara swara samyojaneyalli, Gokak (Shri. K.Sudarshanji avara aagamana) mattu Hubballi (Shri. Ashok Singhal ji avara janmadinada aacharane) ee 2 pramukha sabhegalalli haadida nenapu. Khushi aaytu haadina audio keli, of course ee swara samyojaneye bere nanu haadidde bere, idoo kooda tumbaane chennaagide…

    Dhanyavaadagalu,
    Santosh.

Leave a Reply

Your email address will not be published. Required fields are marked *