ಶಕ್ತಿ ಪರಾಕ್ರಮ ಆವಾಹನೆಗೆ, ಕಂಕಣ ಧರಿಸಿ ಸಾಧಕರೆ
ಹಿಂದುತ್ವದ ಆರಾಧಕರೆ || ಪ ||
ಚಂಡಮುಂಡರಾ ದಂಡನು ದಂಡಿಸಿ
ರುಂಡವ ಖಂಡಿಸಿ ಚೆಂಡಾಡಿ
ದುಷ್ಟರ ದಮನಿಸಿ ಕಷ್ಟಕೆ ಸಿಲುಕಿಹ
ಶಿಷ್ಟ ಶಕ್ತಿಯನು ಕಾಪಾಡಿ || 1 ||
ಕಂಟಕವಳಿಸಿ ಸಂಕಟ ನೀಗಲು
ಟೊಂಕವ ಕಟ್ಟುವ ಸಮಯವಿದು
ಜಡತೆಯ ಜಯಿಸಿ ಸ್ವಾರ್ಥವ ದಹಿಸಿ
ಮುನ್ನಡೆಯುವ ಸುಮಹೂರ್ತವಿದು || 2 ||
ಬಹುರಾಷ್ಟ್ರೀಯರ ಸಂಚಿನ ಸುಳಿಯಲಿ
ನಾಡೆಮದು ಮುಳುಗದೆ ಇರಲಿ
ಸ್ವತ್ವ ಸ್ವದೇಶೀ ಸ್ವಾವಲಂಬನೆಯ
ದಿವ್ಯಮಂತ್ರ ಮೊಳಗುತಲಿರಲಿ || 3 ||