ಶತಶತಮಾನದ ಜಯಜಯಗಾನದ

ಶತಶತಮಾನದ ಜಯಜಯಗಾನದ ಯಶ ಸಮ್ಮಾನದ ಪ್ರಹರಿ
ಹೃದಯಾಕಾಶದ ಉದಯಾನಲ ಭಗವಾ ವಿಜಯವಿಹಾರಿ || ಪ ||

ದಿನ ದಿನದರುಣೋದಯ ರಾಗದೊಳು, ನಾಡಿಗೆ ನಡೆದಿಹ ತಪ
ತ್ಯಾಗದೊಳು, ಸಿಂಧೂ ತೀರದ ಶತಯಾಗದೊಳು
ಘೋಷಿತಗೊಳುತಿದೆ ದೇಶದಲಿ, ಜ್ವಾಲಾಜಿಹ್ವೆಯ ಘನಗಂಭೀರ ಸ್ವರ
ಬಾಳಿನ ಗುರಿ ಬಿತ್ತರಿಸುತಲಿ ಬಾನೆತ್ತರಕೇರಿದೆ ಭಗವಾ ಪ್ರಖರ || 1 ||

ದಿವ್ಯ ತಪೋವನದಾಧಾರ ಧನ, ನೃಪ ಪೀಠಂಗಳ ಚೇತನ ಪ್ರಾಣ,
ತವ ದಕ್ಷಿಣಾ ತನು ಮನ ಧನ ಪ್ರಾಣ
ರಾಷ್ಟ್ರಾರ್ಚನೆಗರಳುತಲಿರಲಿ, ಭೂಮಾತೆಯ ಒಡಲೀಯುವ ಬಹು ಜನುಮ
ಪಾವನ ಕೃಪೆ ಜೀವನ ತುಂಬಿ, ಸಾರ್ಥಕಗೊಳುತಿರಲೀ ನವ ಪ್ರಾಣಸುಮ || 2 ||

ರಾಷ್ಟ್ರೋದ್ಧಾರದ ಶತಸಮರದೊಳು, ನೆಲ ನುಂಗಿದ ಕಣ ಕಣ
ರುಧಿರದೊಳು, ನಶ್ವರ ನರದೇಹದ ಹೃದಯದೊಳು
ಪ್ರಜ್ವಲಿಸುತ ಮೇಲೇಳಲಿದೆ, ಅವಿನಶ್ವರ ಯಜ್ಞೇಶ್ವರನವತಾರ
ಸ್ಫೂರ್ತಿಯನೆರೆಯುತ ಪ್ರೇರಿಸಿದೆ, ಪ್ರಾಚೀನ ನಿಶಾನೆಯ ನಭೋವಿಹಾರ || 3 ||

Leave a Reply

Your email address will not be published. Required fields are marked *