ಸಂಘಗಂಗೆಯ ಪಾನ ಇದು ಸಾಧಕಗೆ

ಸಂಘಗಂಗೆಯ ಪಾನ
ಇದು ಸಾಧಕಗೆ ವರದಾನ
ಧ್ಯೇಯ ಮಾರ್ಗದಲಿ ದಾರಿ ತೋರಿಸುವ ದಿವ್ಯಧಾರೆ ಅಸಮಾನ || ಪ ||

ನಭದಂಥ ಉನ್ನತಿಯ ಧ್ಯೇಯ
ಮೈವೆತ್ತ ಪೂಜ್ಯ ಮಹನೀಯ
ವರಕೇಶವನ ಕನಸು ಆಗುತಿದೆ ನನಸು ಹೊಮ್ಮುತಿಹುದು ಜಯಗಾನ || 1 ||

ಯೋಗದಂಡ ವ್ಯಾಯಾಮ
ಬಾಳಿಗಿದೆ ಹೊಸತು ಆಯಾಮ
ಗೀತೆವಚನಗಳ ವೀರಚರಿತೆಗಳ ಸ್ನೇಹಸುಧೆಯ ಸವಿತಾಣ || 2 ||

ನಡೆನುಡಿಯಗೊಳಿಸುವೆವು ಶುದ್ಧ
ಕಾಯವಿದು ಕಾಯಕಕೆ ಬದ್ಧ
ಸ್ಪಷ್ಟ ಗುರಿಇಹುದು ದಿಟ್ಟನಿಲುವಿಹುದು ಇಹುದು ದೇಶದಭಿಮಾನ || 3 ||

ಬಲು ಶಕ್ತಿವಂತವೀ ದೇಶ
ಘನಸ್ಫೂರ್ತಿಯೀವ ಇತಿಹಾಸ
ಮತ್ತೆ ತಲೆಎತ್ತಿ ಅರಿಯ ಧರೆಗೊತ್ತಿ ಅಳಿಸಿ ನಾಡಿನಪಮಾನ || 4 ||

Leave a Reply

Your email address will not be published. Required fields are marked *