ಸಂಘಗಂಗೆಯ ಭುವಿಗೆ ಇಳಿಸಿಹ

ಸಂಘ ಗಂಗೆಯ ಭುವಿಗೆ ಇಳಿಸಿಹ ನವ ಭಗೀರಥನೇ
ಹಿಂದು ಮನುವನು ಒಂದುಗೊಳಿಸಿಹ ವೀರ ಕೇಶವನೇ || ಪ ||

ವೈದ್ಯ ಪದವಿಯ ಪಡೆದು ನೋಡಿದೆ ನಾಡ ನಾಡಿಯನು
ಸಂಘದೌಷಧ ನೀಡಿಕಳೆಯಲು ಭೇದ ಭಾವವನು
ವ್ಯಕ್ತಿವ್ಯಕ್ತಿಯ ಬೆಸೆದು ನಡೆಸಲು ಸಂಘ ದಾರಿಯಲಿ
ಇರುಳು ಕಳೆವುದು ಬೆಳಕು ಹರಿವುದು ನಾಡ ಬಾನಿನಲಿ || 1 ||

ದೀನದುರ್ಬಲ ಮನಸಿನಾಳದಿ ಧೈರ್ಯ ತುಂಬಿಸಲು
ಒಡೆದು ಹೋಗಿಹ ಹಿಂದು ಜನತೆಯ ಒಂದುಗೂಡಿಸಲು
ನಿತ್ಯಶಾಖೆಯ ಐಕ್ಯಸೂತ್ರವ ನೀಡಿ ತೋರಿಸಿಹೆ
ಹಿಂದು ದೇಶದ ಪರಮವೈಭವ ಮತ್ತೆ ಬರುತಲಿದೆ || 2 ||

Leave a Reply

Your email address will not be published. Required fields are marked *