ಸಂಘ ಸೂತ್ರದ್ಹಾಂಗ ಕೇಶವ ಮಾಧವ ನುಡಿದ್ಹಾಂಗ
ಕೂಡ್ಯಾಡಿ ನಲಿಯೋಣ ಬಲಾಢ್ಯ ಭಾರತ ಕಟ್ಟೋಣ || ಪ ||
ಒಂದಕ್ಕೊಂದು ಕೂಡಿ ಪ್ರತಿದಿನ ಶಾಖೆಗೆ ಹೋಗೋಣ
ಮಾತೃಭೂಮಿ ಸ್ಮರಿಸಿ ರಾಷ್ಟ್ರದ ಚಿಂತನೆ ಮಾಡೋಣ
ಭಗವೆಯ ಅಡಿಯಲ್ಲಿ ಶಿರವನು ಬಾಗಿಸಿ ನಲಿಯೋಣ
ಹಿಂದು ಹಿಂದು ಒಂದು ರಾಷ್ಟ್ರದ ಕಲ್ಪನೆ ತರಿಸೋಣ || 1 ||
ಕಬಡಿ ಕಬಡಿ ಆಡಿ ದೇಹವ ದಣಿಸುತ ನಲಿಯೋಣ
ಯೋಗ ದಂಡ ಕಲಿತು ಶಕ್ತಿಯ ಸಂಚಯ ಮಾಡೋಣ
ಬಡಬಡನೆ ಲಾಠಿ ತಿರುವಿ ದ್ವಂದ್ವದ ಆಟವ ಆಡೋಣ
ವೇತ್ರಚರ್ಮ ರಪ್ ರಪ್ ಗಪ್ಪಂತ ತಪ್ಪಿಸಿಕೊಳ್ಳೋಣ || 2 ||
ಅಸ್ಸಾಮ ಪಂಜಾಬ ಕಾಶ್ಮೀರದ ಕಡೆ ನೋಡೀಗ
ಮತ್ತೆ ನಾಡ ಹತ್ಯೆ ಆದರೆ ಯಾರಿಗೆ ಕೇಳೋಣ
ಒಳಜಗಳ ಸ್ವಾರ್ಥ ಮರೆತು ದೇಶದ ಐಕ್ಯತೆ ಬಯಸೀಗ
ವಿಶ್ವ ಹಿಂದು ಬಂಧು ಸಂಘದ ಶಾಖೆಗೆ ಸೇರೋಣ || 3 ||