ಸಂಘ ದೀಪ್ತಿಯ ಪಿಡಿದು ಹೊರಟಿಹ

ಸಂಘ ದೀಪ್ತಿಯ ಪಿಡಿದು ಹೊರಟಿಹ
ನಿಮಗಿದೋ ಶುಭ ಕಾಮನೆ
ವಿವಿಧ ಮನಗಳು ಒಂದುಗೂಡಿವೆ
ಧ್ಯೇಯ ಸಮರಸ ಸಾಧನೆ || ಪ ||

ಭೀಮ ರಾಯರು ಗಾಂಧಿತಿಲಕರು
ಸಂಘ ಸಲಿಲದಿ ಮಿಂದರು
ಸುದಾಮ ಶಾಮರ ರಾಮಹನುಮರ
ಅಭಂಗ ಏಕತೆ ಕಂಡರು || 1 ||

ಮಾತನಾಡದೆ ಮಾಡಿತೋರುವ
ಸಂಘ ಸೂತ್ರವು ಅನುಪಮ
ಬಂಧ ಬೆಳೆಯಿತು ಭಾವ ಬೆಸೆಯಿತು
ಕಂಪು ಬಿಸಿತು ವನಸುಮ || 2 ||

ಭಜನೆ, ಭೋಜನ ವಚನ ಗೀತೆಗೂ
ಒಂದು ಮಾಡುವ ಬಲವಿದೆ
ಆಟ ಪಾಠವೂ ಹರಟೆ ಕೂಟವೂ
ಮನದ ಅಂತರ ನೀಗಿದೆ || 3 ||

ನಸುಕು ಮುಡಿದೆ ನಿಶೆಯು ಸರಿದಿದೆ
ಕೇಳಿ ಸಮರಸ ಕೂಜನ
ಮೇಲು ಕೀಳಿನ ಭಾವ ಅಳಿಸಿದ
ಸಂಘ ಸರಿತೆಯ ನಿಸ್ವನ || 4 ||

Leave a Reply

Your email address will not be published. Required fields are marked *