ಸಾಹಸದಿತಿಹಾಸವ ಬರೆಯೋಣ ಹೊಸಬಾಳಿನ ಹಾಳೆಯ ತೆರೆಯೋಣ || ಪ ||
ಭಾರತಮಾತೆಯ ಕುವರ ಕಿಶೋರರು ಬಂದು ಸೇರಿಹೆವು ಒಂದಾಗಿ
ದೇಶ ಧರ್ಮಗಳ ಘನತೆಯ ಸಾರಲು ದುಡಿವೆವು ನುಡಿವೆವು ಒಂದಾಗಿ
ಓ ಹಗಲುಗಳೇ, ಬಿಳಿ ಮುಗಿಲುಗಳೇ, ಸುಳಿಗಾಳಿಯ ಅಲೆಗಳೇ ಹರಸಿ
ಬಂಧುತ್ವದ ಧ್ಯೇಯಾದರ್ಶಗಳೇ ಅಂತರಂಗವನು ಆವರಿಸಿ || 1 ||
ಧೈರ್ಯದ ಸ್ಥೈರ್ಯದ ಓ ಮೇರುಗಳೇ ಬೆಳೆಯಿರಿ ಭೀರುತೆಯನ್ನಳಿಸಿ
ಸ್ನೇಹ ಸಲಿಲಗಳೇ ಜ್ಞಾನ ಸ್ರೋತಗಳೇ, ನಾಡಿ ನಾಡಿಯಲಿ ಸಂಚರಿಸಿ
ನಾಳೆ ನಾಳೆಗಳು ಕಳೆದರು ಹೊಳೆಯುವ ಅಕ್ಷರಕ್ಷರವು ಬಂಗಾರ
ಬೆವರಿನ ಗೆರೆಗಳು ನೆತ್ತರ ಹೂಗಳು ಧೃತಿಯು ಮತಿಯು ಶೃಂಗಾರ || 2 ||