ರಾಷ್ಟ್ರದ ಪುನರುಜ್ಜೀವನ ಕಾರ್ಯಕೆ

ರಾಷ್ಟ್ರದ ಪುನರುಜ್ಜೀವನ ಕಾರ್ಯಕೆ, ಆತ್ಮಾಹುತಿಯಾಗಲಿ ಇಂದೇ
ತನು ಮನ ಬುದ್ಧಿ ಸ್ವಭಾವವ ತಿದ್ದುತ,
ಬದುಕುವ ರಾಷ್ಟ್ರದ ಹಿತಕೆಂದೇ                                                               || ಪ ||

ಹೃದಯ ಹೃದಯಕೆ ಹೊತ್ತಿಸಿ ಜ್ಞಾನದ ಜ್ಯೋತಿಯ ಬೆಳಗುವ ಎಂದೇ
ಜನಜಾಗೃತಿಯನು ಗೈಯ್ಯುವ ನವಯುಗ ನಿರ್ಮಾಣದ ಶುಭಕೆಂದೇ   || 1 ||

ಜನಜೀವನದಾ ಕಲ್ಮಶವೆಲ್ಲವ, ತೊಲಗಿಸುವಾ ನಾವಿಂದೇ
ಭರತ ಭೂಮಿಯಾ ನವತೇಜಸ್ಸನು, ತುಂಬುವ ನಾವ್ ಒಲವಿಂದೇ     || 2 ||

ಬಡ ಹೃದಯಕ್ಕೂ ಜೀವರಸವನು, ಬಿಡದಲೆ ಎರೆಯುವ ಇಂದೇ
ವೀರ ಪರಾಕ್ರಮ ಬಲಿದಾನಗಳಿಂ, ರಾಷ್ಟ್ರವ ಉಳಿಸುವೆವೆಂದೇ            || 3 ||

Leave a Reply

Your email address will not be published. Required fields are marked *