ಪ್ರದೀಪ್ತವಾಗಿವೆ ಹೃದಯ ಅನಂತ
ಆಸೇತು ಹಿಮಾಚಲ ಪರ್ಯಂತ || ಪ ||
ಜಗದೊಳಗೆದ್ದಿಹ ಹಾಲಾಹಾಲಗಳ
ಮೃಗಮಾನವರುದ್ಧಾರಕೆ ಕುಡಿದು
ಪೊರೆದಿಹ ವಿಷಕಂಠನ ಹಣೆಗಣ್ಣಿನ
ದಾವಾನಲವೀ ನಾಡಿನೊಳಿಹುದು || 1 ||
ಮನ್ವಂತರಗಳ ದೈವೀ ಸಂಸ್ಕೃತಿ
ಮೈಗೂಡಿರುವೀ ನಾಡಿನ ಜನಕೆ
ನರಜಾತಿಯ ಸೆಳೆದಮರತೆಗೊಯ್ಯುವ
ಮಬ್ಬಾಗದೆ ಹಬ್ಬುವ ಹೆಬ್ಬಯಕೆ || 2 ||
ಬಂದೆರಗಿರೆ ಹಿಂದುವಿನೆದೆ ಬೆಂಕಿಗೆ
ಬಹು ರೀತಿಯ ಭಯ ಭೀತಿಯ ಕೆಡಕು
ಹೊರಹೊಮ್ಮಿದೆ ತಾನೆಂದಿಗು ನಂದದೆ
ಬಹು ಕಾಲದ ಬಲಿದಾನದ ಬದುಕು || 3 ||
ಶತಶತ ಸುತರಾಹುತಿಯಿಂದುರಿಯುತ
ಜಗ ಬೆಳಗುತ ಮೇಲೇರುವ ಜ್ವಾಲೆ
ಸೋಲು ನಿರಾಶಾ ನಿಶೆಯನು ದಹಿಸುತ
ಭಾರತಿಗಾಗಲಿ ಕೀರ್ತಿಯ ಮಾಲೆ || 4 ||