ಪಡುವಣ ತೆಂಕಣ ಮೂಡಣದಂಚಿನ ದಿವ್ಯಾಂಬುಧಿ ಸಂಗಮವು
ಶಕ್ತ ಸಾಗರವು ಭಕ್ತಿಯಾಗರವು ಉಕ್ಕೇರುತಲಿದೆ ಜನಮನವು || ಪ ||
ಆ ಪ್ರಲಯಂಕರ ರುದ್ರಭಯಂಕರ ಹರಮಂದಿರ ಹೈಮಾದ್ರಿ
ಜೀವನದಿಯುಗಮ ಭಾವನಿಧಿ ಪರಮ | ಮಹಿಮಾನ್ವಿತ ವರಗಂಗೋತ್ರಿ || 1 ||
ಗಿರಿಝರಿ ಕಂದರ ವನಸಿರಿ ಸುಂದರ ಗುಡಿಗೋಪುರದುದ್ಯಾನ
ಗಂಗೆ ತುಂಗೆಯರ ಸಿಂಧು ಯಮುನೆಯರ | ಮಂಜುಳ ಮಂಗಳ ಅಭಿಯಾನ || 2 ||
ಗುರುಗೋವಿಂದರ ಪಂಚನದೀ ತಟ ವಿದ್ರೋಹದ ಸೆಲೆಯಾಯ್ತೇ
ಭದ್ರಭಾರತವು ಛಿದ್ರಗೊಳ್ಳುತಲಿ | ಧರ್ಮ ಭಂಜಕರ ನೆಲೆಯಾಯ್ತೆ || 3 ||
ತೊಡು ರಣದೀಕ್ಷೆಯ ವೀರೋದ್ಘೋಷವ ಗಿರಿಗಹ್ವರದಿಂ ಮೊಳಗು
ಪ್ರಾಂತ ಜಾತಿಗಳ ಭ್ರಾಂತ ನಿಶೆಯಳಿಸಿ | ಮತ್ತೆ ನೆಲೆಗೊಳಿಸು ಮುಂಬೆಳಕು || 4 ||