ಓರ್ವ ಕೇಶವ ಓರ್ವ ಮಾಧವ
ಅಮರ ಪಂಕ್ತಿಗೆ ಯಾದವ
“ಜಯಿಸು ಅಜೇಯವ ಸೆಣಸು ಸವಾಲಿಗೆ”
ಸೂತ್ರ ಮೊಳಗಿದ ಬಾಂಧವ || || ಪ ||
ಬಾಲ್ಯದಲಿ ಸಂಗೀತ ಸುಧೆಯಲಿ
ಬಾಲಭಾಸ್ಕರ ಎನಿಸಿದೆ
ಕನ್ನಡ ನೆಲದಲಿ ಸಂಘಧ್ಯೇಯದ
ತಾನ ಪಲ್ಲವಿ ಉಲಿಸಿದೆ || || 1 ||
ಬಾನಿನೆತ್ತರ ಭಾವ ಬಿತ್ತರ
ಹೊಸದು ಆಯಾಮಗಳ ಮಜಲು
ಹಿಂದು ಭಾವನೆ ಬೆಳೆದು ಬೆಳಗಲು
ಹಬ್ಬಿಸಿದೆಯಾ ಅಪೂರ್ವ ಬಿಳಲು || 2 ||
ದಿಟ್ಟ ಮನಸಿನ ಕಠಿಣ ತಪಸಿನ
ಮನು ಹೃದಯಗಳ ಶಿಲ್ಪಿಯೇ
ಭೀಷ್ಮನಂತೆಯೇ ಸಾವ ವರಿಸಿದ
ಸಂಘ ತೋಟದ ಓ ಮಾಲಿಯೇ || 3 ||