ಒಳಗಿನ ಕಣ್ಣನು ತೆರೆದು ನೋಡಿದರೆ
ತಿಳಿವುದು ಭಾರತ ಮಕ್ಕಳ ಹಿರಿಮೆ || ಪ ||
ಬುದ್ಧಿಯ ಚೋದಿಸಿ ಜಗವನೆಬ್ಬಿಸುವ
ಮಿತ್ರನ ಶ್ರೇಷ್ಠತೆ ಸಾರಿದೆವು
ಗಿಡ ಮರ ಮಣ್ಣು ಕಲ್ಲು ನೀರಿನಲ್ಲೂ
ಭಗವಂತನ ನಾವ್ ತೋರಿದೆವು || 1 ||
ಜನಗಳು ಬೇರೆ ಮನವದು ಒಂದೇ
ನುಡಿಗಳು ನೂರು ಭಾವನೆಯೊಂದೇ
ನಡೆಗಳು ಬೇರೆ ನೀತಿಯದೊಂದೇ
ವಿವಿಧತೆಯಲ್ಲಿನ ಏಕತೆಯ || 2 ||
ಇತರರು ಕಾಣದ ಊಹೆಗೂ ನಿಲುಕದ
ಅತಿಶಯ ವಿಷಯವ ದರ್ಶಿಸುತ
ಸುತರೆಂದೆಣಿಸುತ ಮತಿಯ ಪ್ರೇರಿಸುತ
ಹಿತವನು ಕೋರುವ ನಲ್ಮೆಯನು || 3 ||
ಜ್ಞಾನದ ಕರ್ಮದ ಪ್ರೇಮಾದರಗಳ
ದಾನದ ಶಾಂತಿಯ ಆಗರವೈ
ಮಾನವತನದಲಿ ದೀನರ ಪೊರೆವೆವು
ಮಾನಕೆ ಪ್ರಾಣವ ನೀಡುವೆವು || 4 ||