ಓಗೊಡಿರಿಂದು ಕಾಲದ ಕರೆಗೆ
ಸ್ಪಂದಿಸ ಬನ್ನಿ ಮಾತೆಯ ಮೊರೆಗೆ || ಪ ||
ಗತ ಇತಿಹಾಸದ ಗರ್ಭದೊಳಡಗಿದ
ಬಡಬಾಗ್ನಿಯ ಬಡಿದೆಬ್ಬಿಸಬನ್ನಿ
ಶತಶತಮಾನದ ಕಡು ಅಪಮಾನದ
ಅಧ್ಯಾಯವ ಕೊನೆಗಾಣಿಸ ಬನ್ನಿ || 1 ||
ಈ ನಾಡಿನ ಗಡಿಗುಡಿಗಳ ರಕ್ಷಣೆ
ಗೈಯಲು ಪ್ರಾಣಾರ್ಪಣೆ ಮಾಡಿರುವ
ಅಗಣಿತ ವೀರರ ಸ್ಮರಣೆಯ ಮಾಡುತ
ಕರ್ತವ್ಯದ ಪಥದಲಿ ಮುನ್ನಡೆವಾ || 2 ||
ಸತ್ತಾರೂಢರ ಭ್ರಷ್ಟಾಚಾರವು
ಹೆಮ್ಮರವಾಗಿ ಬೆಳೆದಿಹುದಿಂದು
ಸ್ವಾರ್ಥ ದುರಾಸೆಯ ಮೇರೆಯ ಮೀರಿ
ರಾಷ್ಟ್ರ ಹಿತವು ಮರೆಯಾಗಿಹುದಿಂದು || 3 ||
ನಕ್ಸಲೀಯ ಪೈಶಾಚಿಕ ನೃತ್ಯವ
ದ್ರೋಹಿಗಳ ದೌರ್ಜನ್ಯದ ಕೃತ್ಯವ
ಕೊನೆಗಾಣಿಸಲು ಕಂಕಣ ಕಟ್ಟಿ
ಪರಮ ವೈಭವದ ಗುರಿಯನು ಮುಟ್ಟಿ || 4 ||