ಓ ಏಳು ಮೈತಾಳು ನವಯುಗ ನಿರ್ಮಾಪಕನೆ

ಓ ಏಳು ಮೈತಾಳು ನವಯುಗ ನಿರ್ಮಾಪಕನೆ || ಪ ||

ಬೊಬ್ಬಿರಿಯುವ ತೆರೆತೆರೆ ಹೃದಯಾಂಬುಧಿಯಂಚಿನಲಿ
ಬರಸಿಡಿಲಿನ ಘನಗರ್ಜನೆ ಗಹನದ ಮಿಂಚಿನಲಿ
ಉದ್ಧಟ ನದಿಯಾರ್ಭಟ ಸೆರೆಸೆರೆಯ ಪ್ರವಾಹದಲಿ
ತೆರೆ ತೆರೆ ಭೀಕರ, ಉರಿಗಣ್ಣನು ಬಡಬಾನಲನೆ || 1 ||

ಗ್ರಹ ಗ್ರಹಗಳ ಸಿಡಿಸುವ ಅಣುಶಕ್ತಿಯ ಅಂಗಾರ
ಪ್ರಲಯೇಶ್ವರನಿಗೆ ಸೃಷ್ಟಿಯ ಮೊದಲಿನ ಶೃಂಗಾರ
ಕರೆ ಸಂಕ್ರಾಂತಿಯ ಜ್ಞಾನತುಷಾರ
ಸ್ಥೈರ್ಯದಿ ಸೃಷ್ಟಿಸು ಪುನರಪಿ ರೂಪಿಸು ವಿಶ್ವವನೆ || 2 ||

ಎದೆಯನು ಮೆಟ್ಟುವ ಮಸಣದ ಭೂತವ ಹೊಡೆದಟ್ಟಿ
ಜಡ ಮಸಣದ ಎದೆಯೊಳಗೂ ಹೊಸಬದುಕನು ಕಟ್ಟಿ
ನವಯುಗದ ಸುಯೋಗದ ಸಾಧನೆ ಗೈ ಬಾ ಹುಟ್ಟಿ
ಯುಗಯುಗದ ಪ್ರಯೋಗದ ಫಲಿತಾಂಶದ ಘೋಷಕನೆ || 3 ||

Leave a Reply

Your email address will not be published. Required fields are marked *