ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ

ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ
ಮುನ್ನುಗ್ಗಿ ಮುನ್ನಡೆ, ಶಿರಬಾಗಿ ಭಗವಗೆ
ಹಳ್ಳಿ ಹಳ್ಳಿಗೆ ಹೋಗಿ ಸಂಘ ಶಾಖೆಯ ಮಾಡಿ
ಒಗ್ಗಟ್ಟಿನಲ್ಲಿಹ ನಮ್ಮ ಬಲವನು ತೋರಿ || ಪ ||

ಕಾಶ್ಮೀರ ಕಬಳಿಸಲು ಪಾಕಿಗಳು ಕಾದಿಹರು
ಅಸ್ಸಾಮಲಿ ದ್ರೋಹಿಗಳು ನುಸುಳಿ ಬೇರು ಬಿಟ್ಟಿಹರು
ಖಲಿಸ್ಥಾನಕಾಗಿ ನಡೆವ ಮಾರಣ ಹೋಮವ ನೋಡು
ಎಚ್ಚರಾಗೋ ನೀ ಮರೆತು ತುಚ್ಚವಾದ ಭೇದಭಾವ || 1 ||

ಜಗದಗಲ ಹಿಂದುಗಳು ನನ್ನೆಚ್ಚಿನ ಬಂಧುಗಳು
ಅವರ ನೋವೆ ನನಗೆ ನೋವು ಅವರ ನಲಿವೆ ನನಗೆ ನಲಿವು
ಈ ಪರಿಯ ಬಂಧುಭಾವ ದೇಶಪ್ರೇಮ ತುಂಬಿ ಬರಲು
ಭಾರತಾಂಬೆ ಮತ್ತೆ ಜಗದಿ ಮೆರೆಯುವಳು ನಿಶ್ಚಿತ || 2 ||

ಕೇಶವರು ನಾಗಪುರದಿ ನೆಟ್ಟರಂದು ಸಂಘಸಸಿ
ಮಾಧವರ ಹಿರಿತನದಿ ಬೆಳೆದಿಹುದು ದೇಶವ್ಯಾಪಿ
ಸಂಘಪುಷ್ಪದಾ ಸುಗಂಧ ಜಗವೆಲ್ಲ ಪಸರಿಸಲು
ಹೂವು ಕಾಯಿಯಾಗಿ ಮಾಗಿ ಹಣ್ಣಾಗುತಲಿದೆ ನೋಡಾ || 3 ||

Leave a Reply

Your email address will not be published. Required fields are marked *