ನಿನ್ನನೆಂತು ಅರ್ಚಿಸಲಿ ನಿನ್ನನೇನು ಬೇಡಲಿ
ನಿನ್ನ ಸೊಬಗ ನಾನೆಂತು ಬಣ್ಣಿಪೆ ತಾಯೆ ? || ಪ ||
ತುಂಬಿ ಹರಿವ ನದಿಗಳು ಒಡಲೊಳಗಿನ ಗಣಿಗಳು
ಸಾಲು ಸಾಲು ಬೆಟ್ಟಗಳಲಿ ತೇಗ ಗಂಧ ತರುಗಳು
ಮುಕುಟದಲಿ ಹಿಮರಾಶಿ ಪದತಲದಲಿ ಜಲರಾಶಿ
ನಿನ್ನೊಡಲ ಸಂಪದವ ನನ್ನಾಣೆ ಅರಿಯೆ ತಾಯೆ || 1 ||
ನಿನ್ನ ಸುತರು ಕೋಟಿ ಕೋಟಿ ನಿನ್ನ ಗರ್ಭಕಿಲ್ಲ ಸಾಟಿ
ನಿನ್ನ ಮಡಿಲ ಧರ್ಮವ ಒಯ್ದರವರು ಕಡಲ ದಾಟಿ
ದುಃಖ ದೈನ್ಯ ಕಷ್ಟಗಳ ನಿಂತರವರು ಅಂದು ಮೆಟ್ಟಿ
ಅವರೆಲ್ಲರ ಶೌರ್ಯಕೆ ಸ್ಫೂರ್ತಿಯಾಗಿ ನಿಂತೆ ತಾಯೆ || 2 ||
ಇಂದು ನಮ್ಮ ದೈನ್ಯ ಕಳೆಯೆ ಮನದೊಳಗಿನ ತಿಮಿರ ಅಳಿಯೆ
ಸುತರೆಮ್ಮಯ ಬಾಹುಗಳಲಿ ಶಕ್ತಿ ಸ್ಫೂರ್ತಿ ತುಳುಕಿ ಹರಿಯೆ
ಜಗದ್ಗುರು ಸ್ಥಾನವ ದೇಶದಮಿತ ಸಂಪದವ
ಮರಳಿ ಮತ್ತೆ ಪಡೆಯಲು ಅನವರತ ಹರಸು ತಾಯೆ || 3 ||
I forgot the name of the poet of this Song. I composed Raga for this my students got first place in State level competition conducted by BHARATH VIKAS PARUSHAD.
So, plz let me know the poet name.
Thank you 🙏