ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ
ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ ||
ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು
ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು || 1 ||
ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ
ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ || 2 ||
ಧ್ರುವ ಸಂಜೀವಿನಿ ಧರ್ಮ ವಿಕಾಸದ ನೆಲೆಗಭಿನಂದನೆ ಭಾರತಿಗೆ
ಭಾವೀ ಬದುಕಿನ ಭಾವ ಬುನಾದಿಗೆ ಜೀವಗೌರವದ ಸಂಸ್ಕೃತಿಗೆ || 3 ||