ನಮೋ ಜ್ಞಾನದಾನಿ ಜಗದ್ಗುರುವಿಗೆ
ಹೃದಯಸೌಧ ಶಿಖರವಾಸಿ ಭಗವೆಗೆ || ಪ ||
ಅಗ್ನಿಮುಖದಿ ಸಿಂಧುತಟದಿ ವೇದಪಠನ ನಡೆಸುತ
ಕ್ಷಾತ್ರ ಹೃದಯದಗ್ನಿ ಉರಿಸಿ ಗಡಿಯ ರಕ್ಷೆಗೈಯುತ
ವಿಜಯಸ್ಥಂಭವೇರುತಿಹುದು ಗಗನ ಸೇರಿ ಮೆರೆಯುತ
ಬೆಳಕು ಬೀರಿ ಜಗಕೆ ದಾರಿ ತೋರಿದಾರ್ಯ ಸಮರ್ಪಿತ || 1 ||
ಭೀಷ್ಮ ದ್ರೋಣ ಪಾಂಡು ಸುತರಿಗಾಯ್ತು ವರ್ಗ ದ್ವಾಪರ
ಗೀತೆಯೊರೆದ ಕೃಷ್ಣನಲ್ತೆ ಶಿಷ್ಯರೊಳಗಗ್ರೇಸರ
ಸೂರ್ಯಚಂದ್ರ ವಂಶವೆಲ್ಲಾ ಭಗವೆಯಾಜ್ಞೆಗಾಗಿಯೇ
ಅರಿಯ ಸೀಳಿ ಬದುಕಿ ಬಾಳಿ ಕೀರ್ತಿವೆತ್ತ ಗುರುಕುಲ || 2 ||
ಹಿರಿಮೆ ಗಳಿಸಿ ಬೆಳೆಯುತಿಹುದು ನಮ್ಮದಿಂತು ಗುರುಕುಲ
ಯುಗಯುಗಾಂತರಗಳಿಂದ ತಪದ ನೆಲೆಯಿದೀ ನೆಲ
ಆದಿರಹಿತ ಅಂತ್ಯರಹಿತ ಶಿಷ್ಯಗಣದ ಸಿರಿಧರೆ
ತ್ಯಾಗಿಯೋಗಿ ವೀರವರರ ಸೃಜಿಸುವೀ ಪರಂಪರೆ || 3 ||