ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ
ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ
ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ ||
ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ
ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ
ಭಿನ್ನಮತೀಯರಾದರೂ ನಾವು ಭಾರತೀಯರು || 1 ||
ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು
ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು
ನಮ್ಮ ತಾಯಿ ನಾಡಿದು ಹೆಮ್ಮೆ ತರುವ ಬೀಡಿದು || 2 ||
ನಮ್ಮ ಜನರ ಮನವು ಸದಾ ಹಿಂದುಮಹಾಸಾಗರ
ನಮ್ಮ ಭಾರತೀಯರ ಹೃದಯ ಸ್ನೇಹದಾಗರ
ಹೆಮ್ಮೆ ತರುವ ಸಂಸ್ಕೃತಿ ನಮ್ಮ ಹಿಂದು ಸಂಸ್ಕೃತಿ || 3 ||
ವೀರಶೂರ ಯೋಧರು ನಾಡಿಗಾಗಿ ದುಡಿದರು
ಧೈರ್ಯ ಶೌರ್ಯದಿಂದಲಿ ಬದುಕಿ ಬಾಳಿ ಮೆರೆದರು
ಇವರು ಭಾರತಾಂಬೆಯ ಮಮತೆ ಮಡಿಲ ಮಕ್ಕಳು
ಅವಳ ಮನದ ಬನದಲಿ ಅರಳಿ ನಿಂತ ಹೂಗಳು
ಎಂದು ಒಂದೇ ನಾವ್ಗಳು ಎಂದು ಒಂದೆ ನಾವ್ಗಳು || 4 ||
ಇದರ ಆಡಿಯೋ ಇದೆಯೇ??