ನಾಡಸೇವೆಯೆ ನಮ್ಮ ಜೀವನದ ಉಸಿರು
ಧನ್ಯತೆಯೆ ಬಹುಮಾನ ಬೇಡೆಮಗೆ ಹೆಸರು || ಪ ||
ಮೂರು ದಿನ ಬಾಳ್ವೆಯದು ಸಾರ್ಥಕವು ಆಗುವುದು
ಆದರ್ಶದಮೃತವ ಸ್ವೀಕರಿಸಿದಾಗ
ಪತಿತರುದ್ಧಾರದ ಪುಣ್ಯತಮ ಕಾಯಕದಿ
ಒಮ್ಮನದಿ ಒಗ್ಗೂಡಿ ಸಹಕರಿಸಿದಾಗ || 1 ||
ಬರಿಯ ಬೋಧನೆಗಿಲ್ಲಿ ಕಿಂಚಿತ್ತು ಬೆಲೆಯಿಲ್ಲ
ವಚನ ಶೂರರಿಗೆಂದು ಶಾಶ್ವತದ ನೆಲೆಯಿಲ್ಲ
ಕಣ್ಣ ಮುಂದಿರೆ ನಾಕ ಬೆನ್ನ ಹಿಂದೆಯೆ ನರಕ
ಮುನ್ನಡೆದು ಶ್ರಮಿಸುವವಗೆಂದಿಗೂ ಸೋಲಿಲ್ಲ || 2 ||
ನುಡಿವ ಮಾತಿಗೆ ಶೋಭೆ ನಮ್ಮದೊಂದೊಂದು ಕೃತಿ
ನೀಡಬೇಕಿಹುದಿಂದು ಕಾಯಕಕೆ ಶೀಘ್ರಗತಿ
ಕಾಲಚಕ್ರವು ಮರಳಿ ಕಾಯ ಬಾಡುವ ಮುನ್ನ
ಕಟ್ಟಿನಿಲಿಸಲು ಬನ್ನಿ ನವ ಭಾರತ ಭವನ || 3 ||