ನದನದಿಗಳ ಗಿರಿವನಗಳ ತಾಯೆ ಭಾರತ ಮಾತೆ
ಓಂಕಾರದ ಝೇಂಕಾರದಿ ನಿನಗಿದೊ ಶುಭಗೀತೆ || ಪ ||
ಹಿಮಚುಂಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು
ಬಿರುಗಾಳಿಯ ಭಿತ್ತಿಯಿಂದ ನೀನೆಮ್ಮನು ಹರಸು |
ಗಂಗೆ ಯಮುನೆ ಸಂಗಮದಲಿ ನಿನ್ನ ವೇದಘೋಷ
ದೇವದಾರು ವನಗಳಲ್ಲಿ ನಿನ್ನ ಮಂದಹಾಸ || 1 ||
ವಿಂಧ್ಯಾಚಲದೀಚೆಗಿಲ್ಲಿ ಸಂಧ್ಯಾರುಣ ಛಾಯೆ
ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೇ |
ಪರ್ವತಗಳ ಶಿಖರದಿಂದ ಕಡಲಂಚಿನ ತನಕ
ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ || 2 ||