ಮೊರೆಯಲಿ ಭೋರ್ಗರೆಯಲಿ ಹಿಂದುಶಕ್ತಿಯ ಸಾಗರ
ನಡೆಯಲಿ ಮುನ್ನಡೆಯಲಿ ಯುವಸಮೂಹದ ಆಗರ || ಪ ||
ಕಡಿದು ಕಳಚುತ ಸುತ್ತ ಬಿಗಿದಿಹ ದುಷ್ಟ ದುರುಳರ ಸೇಡನು
ಬಿಡದೆ ಪೊರೆವುತ ಹೊತ್ತು ಸಲಹುವ ಸ್ವರ್ಗದಾ ಸಿರಿಬೀಡನು
ಕ್ಷಾತ್ರಭಾವದಿ ವೀರಸುಧೆಯನು ಕುಡಿದು ಜಯಿಸುವ ನಾಡನು || 1 ||
ಕರುಳಬಳ್ಳಿಯ ತುಳಿವುದೇತಕೆ ತರತಮದ ಪರಿ ಏತಕೆ
ಸರಿಸಮಾನರು ಧ್ಯೇಯಪಥದಲಿ ಸುಡಲಿ ಅಂಜಿಕೆ ನಾಚಿಕೆ
ಒಂದೆ ತಾಯಿಯ ಮಕ್ಕಳೆಲ್ಲರು ಒಂದುಗೂಡುತ ರಾಷ್ಟ್ರಕೆ || 2 ||
ವೀರಪುರುಷರ ವಿಜಯಗಾಥೆಯ ಕ್ರಾಂತಿಗೀತೆಯ ಹಾಡುತ
ಯುವಸಮಾಜಕೆ ರಾಷ್ಟ್ರಪ್ರೇಮದ ಸ್ಫೂರ್ತಿ ಬುತ್ತಿಯ ನೀಡುತ
ತಾಯಸೇವೆಯೆ ಬಾಳ್ವೆಯಾಗಲಿ ಸ್ವಾರ್ಥ ಮೋಹವ ಬಿಸುಡುತ || 3 ||