ಮೊಗವೆತ್ತಿ ದನಿಯೆತ್ತಿ ಕೈಯೆತ್ತಿ ಹಾಡುವೆವು
ಭಾರತಿಯ ಜಯದ ಉದ್ಘೋಷ
ತುಂಬಲಿ ಭೂಮಿ ಆಕಾಶ || ಪ ||
ತನು ತುಂಬಿ ಮನ ತುಂಬಿ ಬರಲಿ ಆವೇಶ
ನೆನಪಿರಲಿ ಗಮ್ಯ ಉದ್ದೇಶ
ಮುಗಿಲ ಕಡೆ ಮುಖರಿಸಲಿ ವಿಜಯ ಸಂಘೋಷ
ಕಾದಿಹುದು ಮಂಗಲ ವಿಶೇಷ || 1 ||
ಒಂದೇ ಸ್ವರ ಒಂದೇ ವರ ಒಂದೇ ಸಂದೇಶ
ತಾಯ ಮಕ್ಕಳಿಗಿಲ್ಲಿ ವಾಸ
ವಂದನೆಗೆ ಗೌರವವು ನಿಂದನೆಗೆ ನಾಶ
ಸಂದೇಹವಿಲ್ಲ ಲವಲೇಶ || 2 ||
ಅವಳೆ ತಾಯವಳೆಮಗೆ ದೇವತಾ ಸದೃಶ
ವಂದೇಮಾತರಂ ಶ್ವಾಸ
ಮೊಳಗುತಿದೆ ದೇವದುಂದುಭಿಯ ವಿಶ್ವಾಸ
ಅಡಗಲಿದೆ ಅಸುರಾಟ್ಟಹಾಸ || 3 ||