ಮಾತೃಮಂದಿರದೊಳಗಿದೋ ಬಾ

ಮಾತೃಮಂದಿರದೊಳಗಿದೋ ಬಾ ಬೆಳಗಿಸಲು ಶುಭ ಆರತಿ || ಪ ||

ಅಳಿದಿರಲು ಹಿಂದಿನದು ಗರಿಮೆ
ಬಂಧನದೊಳಿರೆ ಮಾತೆ ಪ್ರತಿಮೆ
ವಿಭವ ಸಂಪದಹೀನ ಪ್ರತಿಮೆಯ ನಗ್ನತೆಯೆ ತಾ ಕರೆಯುತಿಹುದು || 1 ||

ಇಂದು ನಡೆಯಲಿ ಮಾತೃವಂದನ
ಕಡಿದು ಬೀಳಲಿ ತಾಯ ಬಂಧನ
ಕೋಟಿ ಕಂಠದಿ ಗರ್ಜಿಸಲಿ ರಣವಾದ್ಯ ತಾ ತಾಯ್ನೆಲದ ಜಯಕೆ || 2 ||

ತೂರ್ಯಘೋಷವು ಮೊಳಗುತಿರಲು
ದೀಪಜ್ಯೋತಿಯು ಬೆಳಗುತಿರಲು
ಕರುಣೆಯಿಂದೆದೆ ತುಂಬಿ ವೀಣೆಯು ತಾನೆ ತಾ ಝೇಂಕರಿಸುತಿರಲು || 3 ||

Leave a Reply

Your email address will not be published. Required fields are marked *